Spa ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ : 6 ಜನ ಮಹಿಳೆಯರ ರಕ್ಷಣೆ.!

Share The News

ಬೆಂಗಳೂರು : ಬೆಂಗಳೂರು ನಗರದ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ಸ್ಪಾ  ಹೆಸರಿನಲ್ಲಿ ನಡೆಸುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ, ಆರು ಮಂದಿ ಮಹಿಳೆಯರನ್ನು ರಕ್ಷಿಸಿದ ಘಟನೆ ನಡೆದಿದೆ.

ಬಂಧಿತರು ಸ್ಪಾ ಮ್ಯಾನೇಜರ್ ನವೀನ್ (26) ಮತ್ತು ಸಹಾಯಕ ಭರತ್ ಸಿಂಗ್ (27) ಎಂದು ತಿಳಿದು ಬಂದಿದೆ. ಸ್ಪಾ ಮಾಲೀಕ ಭೀಮಾ ನಾಯಕ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಶೋಧ ನಡೆಸಲಾಗಿದೆ.

ಇನ್ನೂ ದಾಳಿ ವೇಳೆ ದೆಹಲಿ, ಪಶ್ಚಿಮ ಬಂಗಾಳ, ಅಸ್ಸಾಂ . ಥೈಲ್ಯಾಂಡ್ ಮೂಲದ ಆರು ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ಹೊರರಾಜ್ಯದ ಹುಡುಗಿರನ್ನು ಸ್ಪಾದಲ್ಲಿ ಇರಿಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದು, ಈ ಹಿನ್ನೆಲೆ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಸ್ಪಾ ಮೇಲೆ ದಾಳಿ ಮಾಡಿದ್ದಾರೆ.

ಸ್ಪಾ ಮಾಲೀಕ ಭೀಮಾನಾಯಕ್, ನವೀನ್, ಭರತ್ ಸಿಂಗ್ ಹೊರರಾಜ್ಯದ ಅಮಾಯಕ ಮಹಿಳೆಯರಿಗೆ ಕೆಲಸದ (job) ಆಸೆ ತೋರಿಸಿ ಸ್ಪಾಗೆ ಕರೆದುಕೊಂಡು ಬರುತ್ತಿದ್ದರು. ಬಳಿಕ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿ ಅಕ್ರಮವಾಗಿ  ಹಣ ಸಂಪಾದಿಸುತ್ತಿದ್ದರು ಎಂಬುದು ವಿಚಾರಣೆ ವೇಳೆ ಬಯಲಾಗಿದೆ.

ಮೂರು ಸಾವಿರ ರೂ. ನಗದು, ಎರಡು ವಾಕಿಟಾಕಿ, ಮೊಬೈಲ್, ಸ್ವಾಪಿಂಗ್ ಯಂತ್ರ, ಕಾಂಡೋಮ್ಸ್ ಸೇರಿ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.


Share The News

Leave a Reply

Your email address will not be published. Required fields are marked *

error: Content is protected !!