ಕೊರೊನಾ ಎರಡನೆ ಅಲೆ ಶುರುವಾಗಿದ್ದು ಇಂತಹ ಸಂದಿಗ್ಧ ಸಮಯದಲ್ಲಿ ತಮ್ಮ ಜೀವದ ಹಂಗು ತೋರೆದು ಜಗತ್ತಿನಲ್ಲಿ ಆಗುಹೊಗುಗಳನ್ನು ಮನೆಯಲ್ಲಿ ನೋಡುವ ಹಾಗೆ ಮಾಡುತ್ತಿರುವ ಪತ್ರಕರ್ತರ ಸೇವೆ ಗುರುತಿಸಿ
ಗೋಕಾಕ ತಾಲೂಕಿನ ಗರಗದ ಶ್ರೀ ದುರ್ಗಾಮಾತಾ ದೇವಸ್ಥಾನದ ಡಾ: ಮಹಾಂತಯ್ಯ ಅಜ್ಜನವರು ಗೋಕಾಕ ತಾಲೂಕಿನ ಪತ್ರಕರ್ತರಿಗೆ ಕಿಟ್ ವಿತರಿಸಿ
ಸರಕಾರ ಪತ್ರಕರ್ತರನ್ನು ಪ್ರಂಟಲೈನ್ ವಾರಿಯರ್ಸ್ ಅಂತ ಘೊಷಣೆ ಮಾಡಿದೆ ಆದರೆ ಉಳಿದವರಿಗೆ ನಿಡಿದಂತೆ ಸೌಲಬ್ಯಗಳನ್ನು ನೀಡದೆ ಎಲ್ಲೊ ಒಂದು ಕಡೆ ಪತ್ರಕರ್ತರನ್ನು ಮರೆತಂತೆ ಕಾಣುತ್ತದೆ ಎಂದರು,
ಅದಲ್ಲದೆ ನಮ್ಮ ಸಮಿತಿಯಿಂದ ಕೇವಲ ಪತ್ರಕರ್ತರೆನ್ನದೆ ಕೊರೊನಾ ಸಂಕಷ್ಟಕ್ಕೆ ಒಳಗಾದ ಬಡವರು ಯಾರೆ ಆಗಲಿ ನಮ್ಮನ್ನು ಸಂಪರ್ಕಿಸಿದರೆ ಅಂತವರಿಗೂ ಕೂಡ ನಾವು ಸಹಾಯ ಮಾಡುತ್ತೇವೆ, ಇನ್ನು ಲಾಕಡೌನ್ ಮುಗಿಯುವ ತನಕ ನಮ್ಮ ಕೈಲಾದಷ್ಟು ಬಡವರಿಗೆ ಊಟದ ವ್ಯವಸ್ಥೆ ಮಾಡುತ್ತೇವೆಂದರು.
ಇನ್ನೂ ಪತ್ರಕರ್ತರ ಸೇವೆ ಗುರುತಿಸಿ ಕಿಟ್ ನೀಡಿದ ಡಾ: ಮಹಾಂತಯ ಅಜ್ಜನವರಿಗೆ ಗೋಕಾಕ ಪ್ರೇಸ್ ಅಸೋಸಿಯೇಷನ್ ಸದಸ್ಯರು ಅಭಿನಂದಿಸಿದರು.