ಗೋಕಾಕ : ನಗರದ ಹಾಗೂ ಗ್ರಾಮೀಣ ಭಾಗದಲ್ಲಿ ನಾಳೆ ಅಂದರೆ ದಿನಾಂಕ: 24.05.2021 ರಿಂದ ದಿನಾಂಕ: 7.06.2021 ರವರೆಗೆ ಲಾಕ್ ಡೌನ್ ಮುಂದುವರೆಸಲಾಗಿದ್ದು, ತಾಲೂಕಿನಾದ್ಯಂತ CrPC ಕಲಂ 144 ಜಾರಿಯಲ್ಲಿ ಇರುತ್ತದೆ. ಸದರಿ ಅವಧಿಯಲ್ಲಿ ಈ ಮೊದಲಿನ ಲಾಕ್ ಡೌನ್ ಷರತ್ತುಗಳು ಮುಂದುವರಿಯುತ್ತವೆ. ಸರಕಾರದ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆಯು ಸಾರ್ವಜನಿಕ ಆರೋಗ್ಯದ ಹಿತ ದೃಷ್ಟಿಯಿಂದ ಅತೀ ತುರ್ತು ಅಗತ್ಯವಿರುತ್ತದೆ. ಆದ್ದರಿಂದ ಈ ಕೆಳಗಿನ ಷರತ್ತುಗಳು ಅನ್ವಯಿಸುತ್ತವೆ.
• ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆವರೆಗೂ ಹಾಗೂ ಸಂಜೆ 6.00 ಗಂಟೆಯಿಂದ 8.00 ಗಂಟೆವರೆಗೂ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
• ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆವರೆಗೂ
ಮೀನು ಮತ್ತು ಮಾಂಸ ವ್ಯಾಪಾರಕ್ಕೆ ಅನುಮತಿ ಇದೆ.
• ಕಿರಾಣಿ ಮತ್ತು ದಿನಸಿ ವ್ಯಾಪಾರದ ಸಂಬಂಧ ಹೋಂ ಡೆಲಿವರಿಗೆ ಮಾತ್ರ ಅವಕಾಶ ಇದೆ.
(ಗ್ರಾಮೀಣ ಭಾಗದಲ್ಲಿ ಸೋಮವಾರ, ಬುದುವಾರ ಮತ್ತು ಶುಕ್ರವಾರ ಮಾತ್ರ , ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆವರೆಗೂ ಕಿರಾಣಿ ದಿನಸಿ ವ್ಯಾಪಾರಕ್ಕೆ ಅವಕಾಶ ಇದೆ.)
• ಬೆಳಿಗ್ಗೆ 6.00 ಗಂಟೆಯಿಂದ ಸಂಜೆ 6.00 ಗಂಟೆವರೆಗೂ
ಒತ್ತುವ ಗಾಡಿಯಲ್ಲಿ ಕಾಯಿಪಲ್ಲೆ , ಹಣ್ಣು ವ್ಯಾಪಾರಕ್ಕೆ /ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಲ್ಲದೆ ತುರ್ತು ವೈದ್ಯಕೀಯ ಸೇವೆಗಳು ನಿರಂತರವಾಗಿ ಇರಲಿದ್ದು, ಹೋಟೆಲ್ ಮತ್ತು ಖಾನಾವಳಿಗಳಲ್ಲಿ ಪಾರ್ಸೆಲ್ ಸೇವೆಗೆ ಮಾತ್ರ ಅವಕಾಶ ಇರುತ್ತದೆ.
ಸದರಿ ಅನುಮತಿಸಿದ ಸೇವೆಗಳನ್ನು ಹೊರತುಪಡಿಸಿ ಇತರೆ ಯಾವುದೇ ಸೇವೆಗಳಿಗೆ ಅವಕಾಶ ಇರುವುದಿಲ್ಲ.
ಯಾವುದೇ ರೀತಿಯ ನಿಯಮಾವಳಿಗಳ ಉಲ್ಲಂಘನೆ ಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುವುದಲ್ಲದೇ, ಕಾನೂನು ಕ್ರಮಕ್ಕೆ ಅವಕಾಶವಾಗುತ್ತದೆ ಎಂದು ತಿಳಿಸಲಾಗಿದೆ.
ಈ ಬಗ್ಗೆ ತಕ್ಷಣದಿಂದ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.