ಬೆಳಗಾವಿ :ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮದೇವಿ ಭಕ್ತರಿಗೆ ಸೋಮವಾರದಿಂದ ದೇವಿಯ ದರ್ಶನ ಭಾಗ್ಯ ಲಭಿಸಲಿದೆ. 10 ತಿಂಗಳುಗಳ ಬಳಿಕ ಸವದತ್ತಿ ದೇವಸ್ಥಾನ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ. ಆದ್ರೆ ಜಾತ್ರೆ, ಉತ್ಸವಗಳಿಗೆ ಸಾರ್ವಜನಿಕರ ನಿರ್ಣಬಂದ. ಮುಂದುವರಿಯಲಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ.
ಫೆಬ್ರವರಿ 1 ರಿಂದ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಸಾರ್ವಜನಿಕರಿಗೆ ಮುಕ್ತವಾಗಲಿದೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಮಾಸ್ಕ್ ಕಡ್ಡಾಯವಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹಾಂತೇಶ ಜಿ.ಹಿರೇಮಠ ಆದೇಶದಲ್ಲಿ ತಿಳಿಸಿದ್ದಾರೆ.
ಈ ಕುರಿತು ದೇವಸ್ಥಾನ ಸಿಇಒ ರವಿ ಕೋಟಾರಗಸ್ತಿ º ಮಾಹಿತಿ ನೀಡಿದ್ದು, ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಫೆಬ್ರವರಿ 1 ರಿಂದ ಸಾರ್ವಜನಿಕರ ದರ್ಶನಕ್ಕೆ ತೆರೆಯಲಿದೆ. ದೇವಸ್ಥಾನಕ್ಕೆ ಆಗಮಿಸುವವರಿಗೆ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನ್ ಮಾಡಿಯೇ ದೇವಸ್ಥಾನ ಒಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಭಕ್ತಾದಿಗಳ ಒತ್ತಾಯದ ಮೇರೆಗೆ ಸವದತ್ತಿ ಯಲ್ಲಮ್ಮ ದೇವಸ್ಥಾನ ಓಪನ್ ಆಗಲಿದೆ ಎಂದು ತಿಳಿಸಿದರು.
ಒಟ್ಟಿನಲ್ಲಿ 10 ತಿಂಗಳ ನಂತರ ಯಲ್ಲಮ್ಮನಗುಡ್ಡ ದೇವಸ್ಥಾನ ದರ್ಶನಕ್ಕೆ ತೆರೆಯುತ್ತಿರುವುದು ಭಕ್ತರಿಗೆ ಖುಷಿ ನೀಡಿದೆ