ಗೋಕಾಕ:ಗೋಕಾಕ್ ಫಾಲ್ಸ್ ಹಾಗು ಮಾನಿಕವಾಡಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮುಖಾಂತರ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು ಪ.ಪೂ.ಶ್ರೀ ಮೂರಘರಾಜೇಂದ್ರ ಮಹಾಸ್ವಾಮಿಗಳು ಶೂನ್ಯ ಸಂಪಾದನ ಮಠ.ಇವರು ಅಂಬೇಡ್ಕರ ಪ್ರತಿಮೆಗೆ ಹೋವಿನ ಹಾರ ಹಾಕಿ ಹಾಗು ಯುವ ದಲಿತ ಸಮಿತಿ ವತಿಯಿಂದ ರಕ್ತ ಧಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದ ಅವರು ಅಂಬೇಡ್ಕರ್ ಅವರು ತಮ್ಮ ಬುದ್ಧಿಶಕ್ತಿ, ಚೈತನ್ಯ, ಹೋರಾಟವನ್ನು ಸಮಾನತೆಗೆ ಮೀಸಲಿಟ್ಟಿದ್ದರು.
ಜಾತಿ, ಭಾಷೆ, ಪಂಗಡಗಳನ್ನು ಮೀರಿ ಮನುಷ್ಯ ಬೆಳೆಯಬೇಕು ಎಂದು ಕನಸು ಕಂಡಿದ್ದರು. ಸ್ವಾಭಿಮಾನಿ ಮನುಷ್ಯನಿಗೆ ತನ್ನ ಪಕ್ಕದಲ್ಲಿರುವ ವ್ಯಕ್ತಿಯ ಬಗ್ಗೆಯೂ ಗೌರವ ಇರಬೇಕು ಎಂದು ಹಂಬಲಿಸುತ್ತಿದ್ದರು. ಅಂತಹ ಮಹಾನ್ ನಾಯಕನ ದಿನಾಚರಣೆಯಂದು ಎಲ್ಲರೂ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು
ಎಂದು ಹೇಳಿದರು.
ಯುವ ದಲಿತ ಸಮಿತಿ ಕಾನೂನು ಸಲಹೆಗಾರರು ದೀಪಕ ಕೋಟಬಾಗಿ ಮಾತನಾಡಿದರು ಕಾನೂನು ಅರಿವು ತಿಳಿಸಿಕೊಟ್ಟರು.
ಯುವ ದಲಿತ ಸಮಿತಿ ಸಂಸ್ಥಾಪಕ ದಿವಂಗತ. ಸಿದ್ದು ಕಮಣಡ್ಡಿ ಅವರ ಪತ್ನಿ ತ್ರೇವಣಿ ಕಣಮಡ್ಡಿ ಮಾತನಾಡಿ ಈ ಒಂದು ಸಂಘಟನೆ ನನ್ನ ಪತಿ ಇಲ್ಲಿಯ ವರೆಗೆ ನಡೆಸಿಕೊಂಡು ಬಂದು ನಮ್ಮನ್ನ ಎಲ್ಲಾ ಬಿಟ್ಟ ಹೋಗಿದ್ದಾರೆ ಆದ್ದರಿಂದ ತಾವುಗಳು ಯಾವದೇ ಆಮಿಷಕ್ಕೆ ಒಳಗಾಗದೆ ಅಂಬೇಡ್ಕರ ಅವರ ಆದರ್ಶಕ್ಕೆ ನೀವು ಬೆಲೆ ಕೊಡ ಬೇಕು ಶಿಕ್ಷಣದಲ್ಲಿ ನೀವು ಮುಂದೆ ಬಂದರೆ ಮಾತ್ರ ನಮ್ಮ ಸಮಾಜ ಅಭಿವೃದ್ಧಿ ಆಗುತ್ತೆ ನಿಮಗೆ ಶಕ್ತಿ ತುಂಬಲು ನಾನು ಕಾರ್ಯಕ್ರಮಕ್ಕೆ ಬಂದಿದೆನೇ ಅಂತಃ ಹೇಳಿದರು.
ಈ ಸಂದರ್ಭದಲ್ಲಿ ಯುವ ದಲಿತ ಸಮಿತಿ ಉಪಾಧ್ಯಕ್ಷರಾದ ಈಶ್ವರ ಗುಡಜ ಈ ದೇಶ ಸರ್ವ ಜಾತಿ ಸರ್ವಧರ್ಮ ಸಮಾನತೆಯ ದೇಶ ಎತ್ತಿ ಹಿಡಿಯುವಂತಾ ದೇಶ ಈ ದೇಶಕ್ಕೆ ಸಂವಿಧಾನ ಕೊಡಬೇಕಂತ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೇವಲ ದಲಿತರಿಗೆ ಮಾತ್ರ ಕೊಟ್ಟಿಲ್ಲ ಪ್ರತಿಯೊಂದು ಜಾತಿಗೂ ಮೀಸಲಾತಿಯನ್ನು ಕೊಟ್ಟಿದ್ದಾರೆ ಪ್ರತಿಯೊಂದು ಜಾತಿಗಳಿಗೆ ಕಾನೂನು ಕೊಟ್ಟಿದ್ದಾರೆ ಆದ್ದರಿಂದ ನಾವೆಲ್ಲರೂ ಬಾಬಾಸಾಹೇಬರ ಆಶಯದಂತೆ ಬದುಕಬೇಕು ಬಾಬಾಸಾಹೇಬರ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಪ್ರತಿಯೊಬ್ಬರು ಕಾನೂನನ್ನು ಪಾಲಿಸಬೇಕು ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಯುವ ದಲಿತ ಸಮಿತಿಯ ಕಾರ್ಯಕರ್ತರು ದಲಿತ ಮುಖಂಡರು ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.